Job Description: ವಾಷಿಂಗ್ಟನ್ : ಮಾರಣಾಂತಿಕ ಕೊರೊನಾ ವೈರಸ್ ದಾಳಿಯಿಂದಾಗಿ ತತ್ತರಿಸಿದ ಅಮೆರಿಕಾ ದೇಶವು ವಲಸೆ ಬರುವ ಹೊರ ದೇಶದವರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸುವ ಆದೇಶ ಪ್ರಕಟಿಸಿದೆ. ಈ ಕುರಿತು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷ ಟ್ರಂಪ್ ಘೋಷಿಸಿಕೊಂಡಿದ್ದಾರೆ. ಇದರಿಂದಾಗಿ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗಾಗಿ ಅಮೆರಿಕಕ್ಕೆ ತೆರಳಬೇಕಿದ್ದ ಲಕ್ಷಾಂತರ ಭಾರತೀಯರ ಭವಿಷ್ಯ ಅತಂತ್ರವಾಗುವ ಸಾಧ್ಯತೆ ಇದೆ. * ಕೊರೊನಾ ಹಾವಳಿಯಿಂದಾಗಿ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಅಮೆರಿಕನ್ನರ ಹಿತಾಸಕ್ತಿ ಮತ್ತು ರಕ್ಷಣೆಗಾಗಿ ಅನ್ಯ ದೇಶಗಳ ವಲಸಿಗರಿಗೆ ನಿರ್ಬಂಧ ಹೇರಲು ಅಮೇರಿಕಾ ಮುಂದಾಗಿದೆ.