Job Description: ನವದೆಹಲಿ : ಕೋವಿಡ್-19 ಸೋಂಕು ನಿಯಂತ್ರಿಸಲು ಭಾರತ ಕೈಗೊಂಡಿರುವ ಕ್ರಮಗಳು ಇಡೀ ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಎಂಬ ಕೀರ್ತಿ ಪಡೆದಿದೆ. ಪರೀಕ್ಷೆಗೊಳಗಾದವರ ಸಂಖ್ಯೆ: * ಭಾರತದಲ್ಲಿ ಮೊದಲ 10,000 ಸೋಂಕಿತರು ಪತ್ತೆಯಾಗುವಷ್ಟರಲ್ಲಿ 2.17 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗಿತ್ತು. * ಅಮೆರಿಕದಲ್ಲಿ ಮೊದಲ 10000 ಪ್ರಕರಣಗಳ ಪೈಕಿ 1.39 ಲಕ್ಷ * ಯು.ಕೆ. ಯಲ್ಲಿ 10,000 ಸೋಂಕಿತರು ಪತ್ತೆಯಾಗುವಷ್ಟರಲ್ಲಿ 1.13 ಲಕ್ಷ * ಇಟಲಿಯಲ್ಲಿ 73,000 ಜನರನ್ನು ಪರೀಕ್ಷೆ ಮಾಡಲಾಗಿತ್ತು. * ಕೆನಡಾದಲ್ಲಿ ಮಾತ್ರ 2.95 ಲಕ್ಷ ಮಂದಿಯನ್ನು ಪರೀಕ್ಷೆಗೊಳಪಡಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಪ್ರತಿ 10 ಲಕ್ಷ ಜನರಲ್ಲಿ ಸೋಂಕಿತರ ಲೆಕ್ಕ : * ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 9 ಜನರು ಸೋಂಕಿತರಾಗಿದ್ದಾರೆ. * ಇದೇ ಪ್ರಮಾಣ ಅಮೆರಿಕದಲ್ಲಿ 1,946, ಸ್ಪೇನ್‌ನಲ್ಲಿ 3,864, ಇಟಲಿಯಲ್ಲಿ 2,732, ಫ್ರಾನ್ಸ್‌ನಲ್ಲಿ 2,265 ಹಾಗೂ ಯು.ಕೆ. 1,451, ಜಪಾನ್‌ನಲ್ಲಿ 68 ಸೋಂಕಿತರು ಇದ್ದಾರೆ.