Job Description: ಭಾರತದ ಚೆಸ್ ದಂತಕಥೆಯಾದ ವಿಶ್ವನಾಥನ್ ಆನಂದ್ ಅವರನ್ನು ವರ್ಲ್ಡ್ ವೈಡ್ ಫಂಡ್ (WWF)ನ ಭಾರತದ ರಾಯಭಾರಿಯಾಗಿ ಆಯ್ಕೆಮಾಡಲಾಗಿದೆ. ವಿಶ್ವನಾಥನ್ ಆನಂದ್ ಪರಿಸರ ಶಿಕ್ಷಣ ಕಾರ್ಯಕ್ರಮಕ್ಕಾಗಿ ಸಂಸ್ಥೆಗೆ ಸೇರಿದ್ದಾರೆ. * ಪರಿಸರ ಶಿಕ್ಷಣ ಕಾರ್ಯಕ್ರಮವನ್ನು 1976 ರಲ್ಲಿ ಪ್ರಾರಂಭಿಸಲಾಯಿತು. * ಪರಿಸರ ಶಿಕ್ಷಣ ಕಾರ್ಯಕ್ರಮ ದೇಶದ ಯುವಕರು, ಶಾಲಾ ಮಕ್ಕಳು ಮತ್ತು ನಾಗರಿಕರನ್ನು ತಲುಪಲು ಕ್ರಮ ಕೈಗೊಳ್ಳುತ್ತದೆ. * ಒಟ್ಟು 5 ಲಕ್ಷ ಮಕ್ಕಳು ಮತ್ತು 2000 ಶಾಲೆಗಳನ್ನು ಪರಿಸರ ಶಿಕ್ಷಣ ಕಾರ್ಯಕ್ರಮ ತಲುಪುತ್ತದೆ. * ವರ್ಲ್ಡ್ ವೈಡ್ ಫಂಡ್ : WWF ಎನ್ನುವುದು 1961 ರಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಆಗಿದೆ.