Job Description: ನವದೆಹಲಿ: ಭಾರತದಲ್ಲಿ ವಿಧಿಸಿರುವ ಲೊಕ್ಡೌನ್ ಹೊರತಾಗಿಯೂ ಹಲವು ಪ್ರದೇಶಗಳಲ್ಲಿ ಕರೋನ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆ ದೇಶದಲ್ಲಿ ಒಟ್ಟು 170 ಜಿಲ್ಲೆಗಳನ್ನು ಕೊರೋನಾ ಹಾಟ್ ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೊರೋನಾ ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ದೇಶದ ಜಿಲ್ಲೆಗಳನ್ನು ವಿಂಗಡಿಸಲಾಗಿದ್ದು, ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂದು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ರಾಜ್ಯದಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳು : ಬೆಂಗಳೂರು ನಗರ, ಮೈಸೂರು, ಬೆಳಗಾವಿ ರೆಡ್ ಜೋನ್ ಆಗಿದ್ದು, ಬೀದರ್, ದಕ್ಷಿಣ ಕನ್ನಡ, ಕಲಬುರ್ಗಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳು ಹಾಗೂ ಈ ಜಿಲ್ಲೆಯ ಕೆಲವು ಪ್ರದೇಶ ಹಾಟ್ ಸ್ಪಾಟ್ ಗಳಾಗಿವೆ.