Job Description: ನವದೆಹಲಿ : ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ದೇಶಾದ್ಯಂತ ವಿಧಿಸಿರುವ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿರುವ ಹಿನ್ನಲೆ, ಸಾರ್ವಜನಿಕರಿಗೆ ಅಗತ್ಯ ವಸ್ತು ಹಾಗೂ ಸೇವೆ ಒದಗಿಸಲು ದೇಶಾದ್ಯಂತ ಸುಮಾರು 20 ಲಕ್ಷ ಸುರಕ್ಷಾ ಸ್ಟೋರ್ ಗಳನ್ನು ಆರಂಭಿಸಲು ಚಿಂತಿಸಲಾಗಿದೆ. * ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ದಿನಸಿ ಅಂಗಡಿಗಳು ಮತ್ತು ಇತರೆ ಅಗತ್ಯ ಸೇವೆಗಳನ್ನು ನೀಡುವ ಶಾಪ್ ಗಳನ್ನೇ ಸುರಕ್ಷಾ ಸ್ಟೋರ್ ಗಳಾಗಿ ಪರಿವರ್ತಿಸಲಾಗುವದು. * ದೇಶಾದ್ಯಂತ 20 ಲಕ್ಷ ಅಂಗಡಿಗಳನ್ನು ಸುರಕ್ಷಾ ಸ್ಟೋರ್ ಗಳಾಗಿ ಮಾರ್ಪಡಿಸಲಾಗುವುದು. * ಇಲ್ಲಿ ಕೊರೋನಾ ಸೋಂಕು ಹರಡದಂತೆ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.