Job Description: ಅಮೃತಸರ : ಭಾರತದ ಇತಿಹಾಸದಲ್ಲಿ ನಡೆದ ದುರಂತಗಳಲ್ಲಿ ಒಂದಾದ ಪಂಜಾಬನ ಅಮೃತಸರದಲ್ಲಿ ನಡೆದ ಭೀಕರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ನಡೆದು ಇಂದಿಗೆ ಅಂದರೆ ಏಪ್ರಿಲ್ 13 ಕ್ಕೆ 101 ವರ್ಷ. ಈ ಸಂದರ್ಭದಲ್ಲಿ ಮಡಿದ ಭಾರತೀಯರಿಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿ ವಿವಿಧ ಗಣ್ಯರು ಹುತ್ಮಾತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ಸ್ಮರಿಸಿಕೊಂಡಿದ್ದಾರೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಬ್ರಿಟಿಷ್ ಸೈನ್ಯದ ಕಮಾಂಡರ್ ಆಗಿದ್ದ ಜನರಲ್ ಡಯ್ಯರ್ ನು ಪಂಜಾಬನ ಅಮೃತಸರದಲ್ಲಿನ ಜಲಿಯನ್ ವಾಲಾಬಾಗ್ ಎಂಬ ಸ್ಥಳದಲ್ಲಿ ಸೇರಿದ್ದ ಸುಮಾರು ಹತ್ತು ಸಾವಿರದಷ್ಟು ಅಮಾಯಕ ಮತ್ತು ನಿಶ್ಯಸ್ತ್ರ ಭಾರತೀಯರ ಮೇಲೆ ಸುಮಾರು 1650 ಸುತ್ತು ಗುಂಡು ಹರಿಸುವಂತೆ ತನ್ನ ಸೈನಿಕರಿಗೆ ಆದೇಶಿಸಿದ ಹಿನ್ನಲೆ ಒಟ್ಟು 739 ಭಾರತೀಯರು ತಮ್ಮ ಪ್ರಾಣವನ್ನು ಭಾರತಮಾತೆಗೆ ಅರ್ಪಿಸಿದರು ಮತ್ತು 1,137 ಜನರು ಗಾಯಗೊಂಡಿದ್ದರು.