Job Description: ಮುಂಬೈ: ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT) ಯಾ ಸಂಶೋಧನಾ ತಂಡವೊಂದು ಸ್ಮಾರ್ಟ್ ಸ್ಟೆತಾಸ್ಕೋಪ್ ಅನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ ಇದಕ್ಕೆ ಪೇಟೆಂಟ್ ಕೂಡ ಪಡೆದಿದೆ. ಈ ಸ್ಮಾರ್ಟ್ ಸ್ಟೆತಾಸ್ಕೋಪ್ ನ ವಿಶೇಷವೇನೆಂದರೆ ಇದನ್ನು ಎದೆ ಮೇಲೆ ಇರಿಸದೆ ದೂರದಿಂದಲೇ ಹೃದಯದ ಬಡಿತ ಪರಿಶೀಲಿಸಬಹುದಾಗಿದೆ. ಇದು ಕರೊನಾದಂಥ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯರಿಗೆ ರೋಗಿಯ ಬಳಿ ಹೋಗದೆ ದೂರದಿಂದಲೇ ಪರಿಶೀಲಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಬಾಂಬೆ ಐಐಟಿಯ ಸಂಶೋಧನಾ ತಂಡ ಹೇಳಿಕೊಂಡಿದೆ. * ಈ ಸ್ಮಾರ್ಟ್ ಸ್ಟೆತಾಸ್ಕೋಪ್ ಟ್ಯೂಬ್ ಒಂದಕ್ಕೆ ಎರಡು ಇಯರ್ಪೀಸ್ಗಳನ್ನು ಅಳವಡಿ ಬ್ಲೂಟೂತ್ ಬಳಸಿ ವೈದ್ಯರು ದೂರದಿಂಲೇ ರೋಗಿಯ ಉಸಿರಾಟದ ಹಾಗು ಹೃದಯ ಬಡಿತದ ಶಬ್ದವನ್ನು ಕೇಳಿಸಿಕೊಳ್ಳಬಹುದಾಗಿದೆ.