Job Description: ನವದೆಹಲಿ: ಕೇಂದ್ರ ಸರ್ಕಾರ ವಿಧಿಸಿರುವ ಲಾಕ್ ಡೌನ್ ಆದೇಶಗಳು ಮತ್ತು ಸಾಮಾಜಿಕ ಅಂತರ ಪಾಲಿಸದೇ ಇದ್ದ ಪಕ್ಷದಲ್ಲಿ ಒಬ್ಬ ಕರೋನ ಸೋಂಕಿತ ವ್ಯಕ್ತಿ ಕೇವಲ 30 ದಿನಗಳ ಅಂತರದಲ್ಲಿ ಬರೋಬ್ಬರಿ 406 ಜನರಿಗೆ ಸೋಂಕು ತಗುಲಿಸಬಹುದು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು ಜನತೆ ಲಾಕ್ ಡೌನ್ ನಿಯಮಗಳನ್ನು ಸರಿಯೆಯಾಗಿ ಪಾಲಿಸದ ಇದ್ದಲ್ಲಿ ದೊಡ್ಡ ಗಂಡಾತರ ಎದುರಾಗಬಹುದೆಂದು ತಿಳಿಸಿದೆ. * ದೇಶದಲ್ಲಿ ಒಟ್ಟು 136 ಸರ್ಕಾರಿ ಲ್ಯಾಬ್ ಮತ್ತು 59 ಖಾಸಗಿ ಲ್ಯಾಬ್ ಗಳು ಕರೋನ ವೈರಸ್ ಸೋಂಕು ಪರೀಕ್ಷೆ ನಡೆಸುತ್ತಿದೆ.