Job Description: ಏಪ್ರಿಲ್ 1, 2020 ರಂದು, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಒಟ್ಟು 883 ನಿಗದಿತ ಔಷಧಿಗಳ ಸೀಲಿಂಗ್ ಬೆಲೆಯನ್ನು ಪರಿಷ್ಕರಿಸಿತು, ಮತ್ತು ಔಷಧೀಯ ಪದಾರ್ಥಗಳ ಪೂರೈಕೆಯಲ್ಲಿನ ವಿವಿಧ ಅಡ್ಡಿಗಳನ್ನೂ ಸಾಮಾನ್ಯ ಸ್ಥಿತಿಗೆ ತರುವಲ್ಲಿ ಕೆಲಸಮಾಡುತ್ತಿರುವುದಾಗಿ ಪ್ರಾಧಿಕಾರ ತಿಳಿಸಿದೆ. * ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್, 1940 ರ ಅಡಿಯಲ್ಲಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಒಟ್ಟು 24 ವರ್ಗದ ವೈದ್ಯಕೀಯ ಸಾಧನಗಳನ್ನು ಔಷಧಿಗಳಾಗಿ ಪರಿಗಣಿಸಿ ಸೂಚಿಸಿದೆ. * ಜೊತೆಗೆ ಇನ್ನು ಕೆಲ ನಿಗದಿತ ವೈದ್ಯಕೀಯ ಸಾಧನಗಳ ಬೆಲೆಗಳನ್ನು ಪ್ರಾಧಿಕಾರವು ಮಾರ್ಪಾಡು ಮಾಡಲು ಯೋಜಿಸಿದೆ ಮತ್ತು ತಯಾರಕರು / ಆಮದುದಾರರು ಈ ಪಟ್ಟಿಮಾಡಿದ ಸಾಧನಗಳ ಬೆಲೆಯನ್ನು ಇನ್ನೂ 12 ತಿಂಗಳವರೆಗೆ 10% ಕ್ಕಿಂತ ಹೆಚ್ಚು ಬೆಲೆಯನ್ನು ಹೆಚ್ಚಿಸಬಾರದು ಎಂದು ತಿಳಿಸಿದೆ.