Job Description: ದಿನಾಂಕ ಏಪ್ರಿಲ್ 1, 2020 ರಂದು, ಕರೋನಾ ವೈರಸ್ ಭೀತಿಯಿಂದಾಗಿ ವಿಂಬಲ್ಡನ್ ಪಂದ್ಯಾವಳಿಯನ್ನು ರದ್ದುಪಡಿಸಲಾಯಿತು. ಎರಡನೇ ಮಹಾಯುದ್ಧದ ಆದ ನಂತರ ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ರದ್ದುಗೊಳಿಸಲಾಗುತ್ತಿದೆ. * ವಿಂಬಲ್ಡನ್ ಪದ್ಯಾವಳಿಗಳನ್ನು ಜೂನ್ 29, 2020 ರಿಂದ ಜುಲೈ 12, 2020 ರ ವರೆಗೆ ಲಂಡನ್ ನಗರದ ಹೊರವಲಯದಲ್ಲಿ ಆಯೋಜಿಸಲಾಗಿತ್ತಾದರೂ, ಈಗಿರುವ ಕರೋನ ವೈರಸ್ ಭೀತಿಯಿಂದ ಪದ್ಯಾವಳಿಯನ್ನು ರದ್ದುಗೊಳಿಸಲಾಗಿದೆ. * ಈ ಪಂದ್ಯಾವಳಿಯ ಮುಂದಿನ ಆವೃತ್ತಿಯನ್ನು ಜೂನ್ 28, 2021 ರಿಂದ ಜುಲೈ 11, 2021 ರ ನಡುವೆ ನಡೆಸಲು ತೀರ್ಮಾನಿಸಲಾಗಿದೆ.