Job Description: ದಿನಾಂಕ ಮಾರ್ಚ್ 31, 2020 ರಂದು ಪ್ರವಾಸೋದ್ಯಮ ಸಚಿವಾಲಯವು "ಸ್ಟ್ರಾಂಡೆಡ್ ಇನ್ ಇಂಡಿಯಾ" ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ಆರಂಭಿಸಲಾಗಿದೆ. COVID-19 ನಿಂದಾಗಿ ಭಾರತದಲ್ಲಿ ಹೇರಿರುವ ಲಾಕ್ ಡೌನ್ ನಡುವೆ ಇಲ್ಲಿ ಸಿಲುಕಿ ಹಾಕಿಕೊಂಡಿರುವ ವಿದೇಶಿ ಪ್ರವಾಸಿಗರಿಗೆ ತಮ್ಮ ಮಾಹಿತಿಯನ್ನು ಪ್ರಸಾರ ಮಾಡುವ ಉದ್ದೇಶವನ್ನು ಈ ಪೋರ್ಟಲ್ ಹೊಂದಿದೆ. ಭಾರತ ಸರ್ಕಾರ ಮತ್ತು ವಿದೇಶಿ ಸರ್ಕಾರವು ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಕ್ರಮಗಳ ಕುರಿತ ಮಾಹಿತಿ ನೀಡುತ್ತದೆ.