Job Description: ನವದೆಹಲಿ : ಕೊರೊನಾ ವೈರಸ್ ಭೀತಿ ಹಿನ್ನೆಲೆ ಭವಿಷ್ಯ ನಿಧಿ (PF) ಪಿಂಚಣಿದಾರರಿಗೆ ಪಿಎಫ್ ಹಣವನ್ನ ವಾಪಸ್ ಪಡೆಯುವ ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ನಿಯಮ ಸಡಿಲಿಸಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ. ನೌಕರರ ತಮ್ಮ ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆ ಅಥವಾ ನೌಕರರ ಖಾತೆಯಲ್ಲಿರುವ ಒಟ್ಟು ಹಣದ ಶೇ. 75 ರಷ್ಟು ಈ ಎರಡರ ಪೈಕಿ ಯಾವುದು ಕಡಿಮೆ ಮೊತ್ತವೋ ಅದನ್ನು ವಾಪಸ್ ಪಡೆಯಬಹುದಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆ ತಿಳಿಸಲಾಗಿದೆ.