Job Description: ನವದೆಹಲಿ : ಇದೆ ಮಾರ್ಚ್ 28 ರಂದು ಜಗತ್ತಿನಾದ್ಯಂತ ಅರ್ಥ್ ಅವರ್ ಆಚರಿಸಲಾಗುತ್ತದೆ. ಇದೇ ಶನಿವಾರ ಮಾರ್ಚ್ 28 ರಂದು ರಾತ್ರಿ 8.30 ರಿಂದ 9.30 ರವರೆಗೆ ಎಲ್ಲ ಮನೆಯ/ಕಚೇರಿ/ಕಾರ್ಖಾನೆ ವಿದ್ಯುತ್ ದೀಪಗಳು ಬಂದ್ ಆಗಲಿವೆ. ಈ ಆಚರಣೆಯ ಹಿಂದಿರುವ ಮುಖ್ಯ ಉದ್ದೇಶ ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಏರುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯುವುದಾಗಿದೆ. ಒಟ್ಟು 170 ದೇಶಗಳ ವಿವಿಧ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಸುಮಾರು 8:30 ರಿಂದ 9:30 ರ ಸಮಯದಲ್ಲಿ ಒಂದು ಗಂಟೆ ಕಾಲ ಬಂದ್ ಮಾಡುವ ಮೂಲಕ ಅರ್ಥ್ ಅವರ್ ಆಚರಣೆಯನ್ನು ಆಚರಿಸಲಾಗುತ್ತದೆ. ಅರ್ಥ್ ಅವರ್ ಎಂದರೇನು? - 2007ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾದಲ್ಲಿರುವ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್(world wide fund for nature) ಸ್ವಯಂ ಸೇವಾ ಸಂಸ್ಥೆ ಈ ಆಂದೋಲನದ ಹುಟ್ಟುಹಾಕಿತು. - ಸಾಮಾನ್ಯವಾಗಿ ಮಾರ್ಚ್ 28 ಅಥವಾ 29 ಇದನ್ನು ಆಚರಿಸಲಾಗುತ್ತದೆ.