Job Description: ಭುವನೇಶ್ವರ್ : ಮಾರಕ ಕರೋನ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಕೋರೋನಾ ವೈರಸ್ ಚಿಕಿತ್ಸೆಗೆ ದೇಶದ ಅತಿ ದೊಡ್ಡ ಆಸ್ಪತ್ರೆ ನಿರ್ಮಿಸಲು ಒಡಿಶಾ ಸರ್ಕಾರ ತೀರ್ಮಾನಿಸಿದೆ. 1000 ಹಾಸಿಗೆಗಳ ಸೌಲಭ್ಯ ಹೊಂದಿರಲಿರುವ ಈ ಆಸ್ಪತ್ರೆ ನಿರ್ಮಾಣಕ್ಕೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಒಡಿಶಾ ರಾಜ್ಯ ಸರ್ಕಾರ, ಕಾರ್ಪೊರೇಟ್ ಕಂಪನಿಗಳು ಮತ್ತು ಎರಡು ಮೆಡಿಕಲ್ ಕಾಲೇಜುಗಳ ಮಧ್ಯೆ ಏರ್ಪಟ್ಟಿದೆ. ಈ ಆಸ್ಪತ್ರೆಯನ್ನು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ನಿರ್ಮಾಣ ಮಾಡಲಾಗುವುದು.