Job Description: ನವದೆಹಲಿ : ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಬರುವ 21 ದಿನಗಳ ಕಾಲ ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೆ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ₹15,000 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಈ ಮೀಸಲು ಹಣವನ್ನು ಕೊರೊನಾವೈರಸ್ ಪರೀಕ್ಷಾ ಕೇಂದ್ರಗಳು, ಪ್ರತ್ಯೇಕ ವಾರ್ಡ್ಸ್, ಹಾಸಿಗೆಗಳ ಸೌಲಭ್ಯ, ಐಸಿಯುಗಳು, ವೆಂಟಿಲೇಟರ್‌ಗಳು ಮತ್ತು ತರಬೇತಿ ನೀಡುವ ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಮೀಸಲಿಡಲಾಗಿಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.