Job Description: ಭಾರತವು ನೇಪಾಳದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕಾಗಿ ಸುಮಾರು 107.01 ಮಿಲಿಯನ್ ನೇಪಾಳಿ ರೂಪಾಯಿಗಳನ್ನು ನೀಡುವ ಒಪ್ಪಂದದಡಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು. ಈ ಒಪ್ಪಂದದ ಅನುಸಾರ ಮೊದಲ ಹಂತವಾಗಿ ಭಾರತವು 8 ಲಕ್ಷ ರೂಪಾಯಿಗಳ (INR) ಚೆಕ್ ಅನ್ನು ನೇಪಾಳಕ್ಕೆ ಹಸ್ತಾಂತರಿಸಿತು. ನೇಪಾಳದಲ್ಲಿ ಶಾಲೆಗಳನ್ನು ನಿರ್ಮಿಸುವ ಒಪ್ಪಂದದಿಂದ ಭಾರತ-ನೇಪಾಳ ರಾಷ್ಟ್ರಗಳ ಅಭಿವೃದ್ಧಿ ಸಹಭಾಗಿತ್ವ ನಿರ್ಮಾಣಕ್ಕೆ ಸಹಕಾರಿಯಾಗಲಿದೆ.