Job Description: ನವದೆಹಲಿ : ದಿನಾಂಕ ಮಾರ್ಚ್ 17, 2020 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲತಾಣದಲ್ಲಿ ವಿಶೇಷ ಕಾಯಿಲೆಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಕರಡು ನೀತಿಯನ್ನು ಪ್ರಕಟಿಸಲಾಗಿದೆ. ಈ ಕರಡನ್ನು ಸಾರ್ವಜನಿಕರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭಿಪ್ರಾಯಗಳಿಗಾಗಿ ಮುಕ್ತವಾಗಿಸಿದೆ. ವಿಶೇಷ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಬಡತನ ರೇಖೆಯ ಕೆಳಗೆ ವಾಸಿಸುವ ಕುಟುಂಬಗಳಿಗೆ ಚಿಕಿತ್ಸೆಗಾಗಿ ಒಂದು ಬಾರಿಗೆ ಸಚಿವಾಲಯವು 15 ಲಕ್ಷ ರೂ ಸಹಾಯಧನವನ್ನು ರಾಷ್ಟ್ರೀಯ ಆರೋಗ್ಯ ನಿಧಿಯಿಂದ ನೀಡಲಾಗುವುದೆಂದು ಪ್ರಕಟಿಸಲಾಗಿದೆ.