Job Description: ಕಾಬೂಲ್ : ಎರಡನೆ ಅವಧಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಅಶ್ರಫ್ ಘನಿ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾಬೂಲ್‌ನ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅಫ್ಘಾನಿಸ್ತಾನದ ಮುಖ್ಯರಾಯಭಾರಿಯಾದ ಸೈಯದ್ ಯೂಸುಫ್ ಹಲೀಂ ಅವರು ಅಶ್ರಫ್ ಘನಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಆದರೆ ಎದುರಾಳಿಯಾದ ಅಬ್ದುಲ್ಲಾ ಅಬ್ದುಲ್ಲಾ, ಸರಕಾರದ ರಚನೆಯನ್ನು ವಿರೋದಿಸಿದ್ದಲ್ಲದೆ, ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಫ್ಘಾನಿಸ್ತಾನದಲ್ಲಿ ಹೊಸ ರಾಜಕೀಯ ಬಿಕ್ಕಟ್ಟಿಗೆ ನಾಂದಿ ಹಾಡಿದ್ದಾರೆ.