Job Description: ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ವರ್ಗಾವಣೆ ಮಾಡುವ ಬಗ್ಗೆ SIPRIನಿಂದ ದತ್ತಾಂಶ ವರದಿ ಪ್ರಕಾರ ಇದೇ ಪ್ರಥಮ ಬಾರಿಗೆ ಶಸ್ತ್ರಾಸ್ತ್ರಗಳನ್ನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುವ ದೇಶಗಳ ಸಾಲಿನಲ್ಲಿ ಭಾರತವು ಕೂಡ ಸ್ಥಾನವನ್ನು ಪಡೆದಿದೆ. ಪ್ರಸ್ತುತ 23 ನೇ ಸ್ಥಾನದಲ್ಲಿರುವ ಭಾರತವು ಈ ಸ್ಥಾನವನ್ನು ದಾಟಿ, ಮುಂಬರುವ ವರ್ಷಗಳಲ್ಲಿ ಮೇಲಕ್ಕೆ ಏರಲಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು ವಿದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಮಾರುವ ಯೋಜನೆಗಳಿಗೆ ಉತ್ತೇಜಿಸುತ್ತಿದೆ ಎಂಬುದು ವಿಶೇಷ.