Job Description: ಮಾರ್ಚ್ 7, 2020 ರಂದು ಜನ ಔಷಧಿ ದಿವಸ ಆಚರಿಸಲಾಗುವದು. ಪ್ರಧಾನಿ ಮೋದಿ ಯವರ ಸರ್ಕಾರ ಜಾರಿಗೆ ತಂದ "ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ" ಕೇಂದ್ರಗಳ ಉಪಯೋಗಗಳು ಮತ್ತು ಸಾಧನೆಗಳ ಸವಿನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯ ಅಂಗವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಏಳು ಪ್ರಧಾನ್ ಮಂತ್ರಿ ಜನ ಔಷಧಿ ಪರಿಯೋಜನಾ ಕೇಂದ್ರಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.