Job Description: ತಿರುವನಂತಪುರ : ಕೇಂದ್ರ ಸರ್ಕಾರದಿಂದ ನೀಡಲಾಗುವ ನಾರಿಶಕ್ತಿ ಪುರಸ್ಕಾರವನ್ನು ಕೇರಳದ ಶತಾಯುಷಿ ಭಾಗೀರಥಿ ಅಮ್ಮ ಮತ್ತು ಕಾರ್ತಿಯಾಯಿನಿ ಅಮ್ಮ ಅವರು ಆಯ್ಕೆಯಾಗಿದ್ದಾರೆ. ಈ ಇಬ್ಬರು ಸಾಧಕಿಯರನ್ನು 2019ನೇ ಸಾಲಿನ ನಾರಿಶಕ್ತಿ ಪುರಸ್ಕಾರಕ್ಕಾಗಿ ಆರಿಸಲಾಗಿದ್ದು ಇಬ್ಬರೂ ಈ ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ. ವಯಸ್ಕರ ಶಿಕ್ಷಣ ಸಮಿತಿಯ ತರಗತಿಗಳಲ್ಲಿ ಪಾಲ್ಗೊಂಡು ಶಿಕ್ಷಣ ಪಡೆದುದಲ್ಲದೆ ಸಮಿತಿಯು ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.