Job Description: ನವದೆಹಲಿ : ಕೇಂದ್ರ ಸರ್ಕಾರವು ಮಾಜಿ ಐಎಎಸ್ ಅಧಿಕಾರಿಯಾದ ಬಿಮಲ್ ಜುಲ್ಕಾ ಅವರನ್ನು ನೂತನ ಮುಖ್ಯ ಮಾಹಿತಿ ಆಯುಕ್ತ (CIC)ರಾಗಿ ನೇಮಕಗೊಳಿಸಿದೆ. ಈ ಹಿಂದೆ ಸೇವೆಯಲ್ಲಿದ್ದ ಸಿಐಸಿ ಸುಧೀರ ಭಾರ್ಗವ ಅವರು ಜನವರಿ 11ರಂದು ನಿವೃತ್ತರಾಗಿದ್ದರು. ಇದೀಗ ಅವರ ಸ್ಥಾನಕ್ಕೆ ಬಿಮಲ್ ಜುಲ್ಕಾ ನೇಮಕವಾಗಿದ್ದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜುಲ್ಕಾ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು.