Job Description: ಮಾಜಿ ಕ್ರಿಕೆಟಿಗ ಮೇಲಾಗಿ ಕನ್ನಡಿಗರಾದ ಸುನೀಲ್ ಜೋಶಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಸಂದರ್ಶನ ನಡೆಸಿದ ಬಿಸಿಸಿಐ ನೇಮಿತ ಕ್ರಿಕೆಟ್ ಸಲಹಾ ಸಮಿತಿಯು ಅಂತಿಮವಾಗಿ ಜೋಶಿ ಅವರನ್ನು ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಶಿಫಾರಸ್ಸು ಮಾಡಿದೆ. * ಮದನ್ ಲಾಲ್, ಆರ್‌ಪಿ ಸಿಂಗ್ ಮತ್ತು ಸುಲಕ್ಷಣ ನಾಯ್ಕ್ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಸುನಿಲ್ ಜೋಶಿ ನೇಮಕ ಮಾಡಿದೆ. * ಸುನೀಲ್ ಜೋಶಿಯವರು ಹಾಲಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಸ್ಥಾನವನ್ನು ತುಂಬಲಿದ್ದಾರೆ. * ಕೇಂದ್ರ ವಲಯದ ಆಯ್ಕೆಗಾರನಾಗಿ ಕಾರ್ಯ ನಿರ್ವಹಿಸಲು ಮಾಜಿ ವೇಗಿ ಹರ್ವಿಂಧರ್ ಸಿಂಗ್ ಆಯ್ಕೆಯಾಗಿದ್ದಾರೆ. * ನೂತನ ಅಧ್ಯಕ್ಷ ಸುನಿಲ್ ಜೋಶಿ ಸಾರಥ್ಯದಲ್ಲಿ ನೂತನ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ದ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾದ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.