Job Description: ನವದೆಹಲಿ : ಚಂದ್ರಯಾನ -2 ಅಲ್ಪ ಹಿನ್ನಡೆಯಾದ ಬಳಿಕ ಚಂದ್ರಯಾನ-3ಕ್ಕೆ ISRO ಸಿದ್ಧತೆ ನಡೆಸಿತ್ತು, ಪ್ರಸ್ತುತ ಕೇಂದ್ರ ಸರ್ಕಾರ ಚಂದ್ರಯಾನ 3 ಕ್ಕೆ ಮುಹೂರ್ತ ನಿಗದಿ ಮಾಡಿದ್ದು, 2021ರ ಮೊದಲ ಭಾಗದಲ್ಲಿ ಚಂದ್ರಯಾನ ನಡೆಯಲಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾದರೂ ಕೂಡ 2021ರಲ್ಲಿ ಚಂದ್ರಯಾನ-3 ನಡೆಸುವುದು ಮಾತ್ರ ನಿಶ್ಚಿತ ಎಂದು ಅವರು ತಿಳಿಸಿದ್ದಾರೆ.