Job Description: ಭಾರತ ಸರ್ಕಾರವು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ರೈತ ಕಲ್ಯಾಣ ಯೋಜನೆಗಳ ಮುಂದುವರೆದ ಭಾಗವಾಗಿ ಕೃಷಿ ವಿಜ್ಞಾನ ಮೇಳ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಮ್ಮೇಳನವನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದರು. ಕೃಶಿ ವಿಜ್ಞಾನ ಕೇಂದ್ರ ಸಮ್ಮೇಳನ * 11ನೇ ಕೃಷಿ ವಿಜ್ಞಾನ ಕೇಂದ್ರ ಸಮ್ಮೇಳನ ಇತ್ತೀಚೆಗೆ ನವದೆಹಲಿಯಲ್ಲಿ ನಡೆಯಿತು. ಕೃಷಿ ವಿಜ್ಞಾನ ಕೇಂದ್ರ ಈ ಕೇಂದ್ರಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ರಚಿಸಿದೆ. ಮೊದಲ ಕೃಷಿ ವಿಜ್ಞಾನ ಕೇಂದ್ರವನ್ನು 1974 ರಲ್ಲಿ ಸ್ಥಾಪಿಸಲಾಯಿತು. ಕೃಷಿ ವಿಜ್ಞಾನ ಮೇಳ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಕೃಶಿ ವಿಜ್ಞಾನ ಮೇಳವನ್ನು ಪ್ರಾರಂಭಿಸಲಾಯಿತು.