Job Description: ಅರ್ಮೇನಿಯಾ ರಾಷ್ಟ್ರಕ್ಕೆ "ವೆಪನ್ ಲೊಕೇಟಿಂಗ್ ರಡಾರ್" (ಶಸ್ತ್ರಾಸ್ತ್ರ ಪತ್ತೆ ರೆಡಾರ್) ಗಳನ್ನು ತಯಾರಿಸಲು ಸುಮಾರು 40 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದವನ್ನು ಭಾರತವು ಪಡೆಯಿತು. ರಷ್ಯಾ, ಪೋಲ್ಯಾಂಡ್ ನ್ನು ದೇಶಗಳನ್ನು ಹಿಂದಿಕ್ಕಿ 40 ಮಿಲಿಯನ್ ಡಾಲರ್ ಒಪ್ಪಂದ ಪಡೆದ ಭಾರತದ ಈ ಯಶಸ್ಸನ್ನು ಮೇಕ್ ಇನ್ ಇಂಡಿಯಾ ಫಲವೆಂದೇ ಭಾವಿಸಲಾಗಿದೆ. ದೇಶಿಯವಾಗಿ ತಯಾರಿಸಿ DRDO ಹಾಗೂ BEL ಸಂಸ್ಥೆಗಳು ತಯಾರಿಸಿರುವ ವೆಪನ್ ಲೊಕೇಟಿಂಗ್ ರಡಾರ್ (ಶಸ್ತ್ರಾಸ್ತ್ರ ಪತ್ತೆ ರೆಡಾರ್) ಗಳನ್ನು ಅರ್ಮೇನಿಯಾ ದೇಶಕ್ಕೆ ರಫ್ತು ಮಾಡಲ್ಪಿದೆ. ಸ್ವಾತಿ ರಡಾರ್ ಗಳನ್ನು ಅರ್ಮೇನಿಯಾಗೆ ರಫ್ತು ಮಾಡುವ ಕೆಲಸ ಈಗಾಗಲೇ ಆರಂಭವಾಗಿದೆ.