Job Description: ಬೆಂಗಳೂರು : ಮಾರ್ಚ್ 5ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಉಪಗ್ರಹ 'ಜಿಐಸ್ಯಾಟ್-1' ಅನ್ನು ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ GSLV F10 ಮೂಲಕ ಈ ಉಡಾವಣೆ ನಡೆಯಲಿದೆ. * 2,275 ಕೆ.ಜಿ. ತೂಕದ ಜಿಐಸ್ಯಾಟ್-1 ಕ್ಷಿಪ್ರ ಭೂ ವೀಕ್ಷಣಾ ಗುಣವನ್ನು ಹೊಂದಿದೆ. * ಪ್ರತಿ 30 ನಿಮಿಷಕ್ಕೆ ಭಾರತದ ಪ್ರತಿ ಭೂ ಪ್ರದೇಶದ ಚಿತ್ರವನ್ನು ತೆಗೆಯುತ್ತದೆ. * ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಮಹತ್ವದ ಚಿತ್ರಗಳನ್ನು ಸೆರೆಹಿಡಿದು ರವಾನಿಸಲಿದೆ.