Job Description: ಜೆರುಸಲೇಂ : ಭೂಮಿ ಮೇಲೆ ನೆಲೆಸಿರುವ ಯಾವುದೇ ಜೀವಿಯಾದರು ಅದು ಜೀವಿಸಲು ಬೇಕಾದ ಮುಖ್ಯವಾದುದು ಆಮ್ಲಜನಕ, ಆದರೆ ಆಮ್ಲಜನಕದ ಸಹಾಯವಿಲ್ಲದೇ ಉತ್ಪಾದಿಸಬಲ್ಲ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಇದುವರೆಗಿನ ಪ್ರಾಣಿ ಜಗತ್ತಿನ ಬಗ್ಗೆ ವಿಜ್ಞಾನಿಗಳ ಕಲ್ಪನೆಯನ್ನೇ ಬದಲಿಸಿದ ಮಹತ್ವವಾದ ಸಂಶೋದನೆಯಾಗಿದೆ. "ಹೆನ್ನೆಗುಯಾ ಸಲ್ಮಿನಿಕೋಲಾ" ಹೆಸರಿನ ಸುಮಾರು 10 ಕೋಶಗಳ ಪರಾವಲಂಬಿ ಜೀವಿಯಾದ ಇದು ಆಮ್ಲಜನಕವಿಲ್ಲದೇ ಬದುಕಬಲ್ಲದು, ಮತ್ತು ಈ ಜೀವಿಯು ಸಾಲ್ಮನ್ ಎಂಬ ತಳಿಯ ಮೀನಿನ ಮಾಂಸಖಂಡದಲ್ಲಿ ಜೀವಿಸುತ್ತದೆ ಎಂದು PNAS ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರತಿಪಾದಿಸಲಾಗಿದೆ.