Job Description: ಲಂಡನ್: 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರದ್ದಾಗಿದ್ದ ಶೂಟಿಂಗ್ ಮತ್ತು ಬಿಲ್ಲುಗಾರಿಕೆ ಸ್ಪರ್ಧೆಗಳು ಭಾರತದಲ್ಲಿ ಅದೇ ವರ್ಷ ಜನವರಿಯಲ್ಲಿ ನಡೆಯಲಿವೆ. 2022 ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ 2022ರ ಕಾಮನ್‌ವೆಲ್ತ್ ಗೇಮ್ಸ್ ನಿಂದ ಈ ಆಟಗಳನ್ನು ಕೈಬಿಡಲಾಗಿತ್ತು, ಆದರೆ ಭಾರತಕ್ಕೆ ಭಾರತಕ್ಕೆ ಹೆಚ್ಚು ಪದಕ ಬರುವ ಈ ಸ್ಪರ್ಧೆಗಳನ್ನು ಕೈಬಿಟ್ಟಲ್ಲಿ ತಾನು ಈ ಕ್ರೀಡಾಕೂಟದಿಂದ ಹೊರಗುಳಿಯುವುದಾಗಿ ತಿಳಿಸಿದ್ದರಿಂದ, ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಗಂಭೀರವಾಗಿ ಪರಿಗಣಿಸಿ, ಸಂಧಾನ ಮಾಡಿಕೊಂಡಿತ್ತು. ಅದರ ಫಲವಾಗಿ ಈ ಸ್ಪರ್ಧೆಗಳನ್ನು ಮಾತ್ರ ಭಾರತದಲ್ಲಿ ನಡೆಸಲು ಅಧಿಕೃತ ಆದೇಶ ಹೊರಬಿದ್ದಿದೆ. ಚಂಡೀಗಢದಲ್ಲಿ ಸ್ಪರ್ಧೆ : 2022ರ ಶೂಟಿಂಗ್ ಮತ್ತು ಬಿಲ್ಗಾರಿಕೆ ಸ್ಪರ್ಧೆಗಳು ಜನವರಿಯಲ್ಲಿ ಚಂಡೀಗಢದಲ್ಲಿ ನಡೆಯಲಿವೆ.