Job Description: ಭಾರತೀಯ ಸೇನೆಯ ಮುಖ್ಯ ಕಚೇರಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು ನವದೆಹಲಿಯ ಕಂಟೋನ್‌ಮೆಂಟ್ ಪ್ರದೇಶದಲ್ಲಿ ಈ ಹೊಸ ಸೇನಾ ಮುಖ್ಯಕಚೇರಿ ಕಟ್ಟಡ ಕೆಲಸ ಆರಂಭಕ್ಕೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು. ಈ ಕಟ್ಟಡವನ್ನು 7 ಅಂತಸ್ತಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಭವನಕ್ಕೆ "ಥಲ್ ಸೇನಾ ಭವನ್" ಎಂದು ಹೆಸರಿಡಲಾಗಿದೆ. * ಸೂರ್ಯೋದಯದ ಮಾದರಿಯಲ್ಲಿ ಭವನದ ವಿನ್ಯಾಸ ಹೊಂದಿರಲಿದೆ. * ಒಟ್ಟು 39 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.