Job Description: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: 4 ನೇ ದಿನ ಭಾರತಕ್ಕೆ 4 ಪದಕ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನ ನಾಲ್ಕನೇ ದಿನ ಭಾರತದ ಮಹಿಳೆಯರಿಗೆ 1 ಬೆಳ್ಳಿ ಪದಕ ಮತ್ತು 3 ಕಂಚಿನ ಪದಕಗಳು ಲಭಿಸಿವೆ. ಭಾರತವು ಇದುವರೆಗೂ 13 ಪದಕಗಳನ್ನು ಪಡೆದುಕೊಂಡಿದೆ . * 4 ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು 7 ಕಂಚಿನ ಪದಕಗಳು ಲಭಿಸಿವೆ. * ಸಾಕ್ಷಿ ಮಲಿಕ್ ಅವರು 65 ಕೆಜಿ ವಿಭಾಗದಲ್ಲಿ ಜಪಾನ್‌ನ ನವೋಮಿ ರ್ಯೂಕ್ ವಿರುದ್ಧ ಬೆಳ್ಳಿಯ ಪದಕ *ವಿನೇಶ್ ಪೋಗಟ್ ಅವರು 53 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್ ಅವರು 57 ಕೆ.ಜಿ. ವಿಭಾಗದಲ್ಲಿ ಕಂಚು * ಗುರುಶರಣ್‌ಪ್ರೀತ್ ಕೌರ್ 72 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.