Job Description: ಆಹಾರ ಸಂಸ್ಕರಣಾ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಂಟಿಯಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಸಾವಯವ ಆಹಾರ ಉತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವದ ಮುಖ್ಯ ಉದ್ದೇಶವು ದೇಶದಲ್ಲಿ ಸಾವಯವ ಆಹಾರ ಉತ್ಪನ್ನಗಳನ್ನು ಬಳಕೆಯನ್ನು ಮತ್ತು ತಯಾರಿಕೆಯನ್ನು ಪ್ರೋತ್ಸಾಹಿಸುವುದಾಗಿದೆ. ಭಾರತದಲ್ಲಿ ಸಾವಯವ ಕ್ಷೇತ್ರ ಪ್ರತಿ ವರ್ಷಕ್ಕೆ ಸುಮಾರು 17% ರಷ್ಟು ವೇಗದಲ್ಲಿ ಬೆಳೆಯುತ್ತಿದೆ ಎಂದು ಉತ್ಸವದಲ್ಲಿ ಘೋಷಿಸಲಾಗಿದೆ. ಈ ಉತ್ಸವದಲ್ಲಿ ಸುಮಾರು 180 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಮತ್ತು ಸ್ವ-ಸಹಾಯ ಗುಂಪುಗಳು ಭಾಗಿಯಾಗಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.