Job Description: ಆರ್ಥಿಕ ಗುಪ್ತಚರ ಘಟಕವು (Economic Intelligence Unit) 2019ರ ವಿಶ್ವವ್ಯಾಪಿ ಶಿಕ್ಷಣದ ಭವಿಷ್ಯದ ಸೂಚ್ಯಂಕವನ್ನು ಪ್ರಕಟಿಸಿದ್ದು ಭಾರತವು ಒಟ್ಟಾರೆ 53 ಅಂಕಗಳೊಂದಿಗೆ ಪ್ರಸ್ತುತ 35 ನೇ ಸ್ಥಾನವನ್ನು ಪಡೆದಿದೆ. ತಮ್ಮ ವಿದ್ಯಾರ್ಥಿಗಳ ಕೌಶಲ್ಯ ಸಾಮರ್ಥ್ಯ ಉತ್ತೇಜಿಸುವ ಆಧಾರದ ಮೇಲೆ ದೇಶಗಳಿಗೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ. ಬೋಧನೆ, ನೀತಿ ಪರಿಸರ ಮತ್ತು ಬೋಧನಾ ವಾತಾವರಣ ಎಂಬ ಮೂರು ವಿಷಯಗಳ ಮೇಲೆ ಅಂಕಗಳನ್ನು ನೀಡಲಾಗುತ್ತದೆ. 2018 ರಲ್ಲಿ ಭಾರತ 41 ಅಂಕಗಳೊಂದಿಗೆ 40 ನೇ ಸ್ಥಾನದಲ್ಲಿತ್ತು ಈ ವರ್ಷ 5 ಸ್ಥಾನ ಏರಿಕೆ ಕಂಡು 35 ನೇ ಕ್ರಮಾಂಕವನ್ನು ಪಡೆದಿದೆ.