Job Description: ವಾಯು ಮಾಲಿನ್ಯವನ್ನು ನಿಯಂತ್ರಿಸಲು ಭಾರತದಲ್ಲಿಯೂ ಕೂಡ ಏಪ್ರಿಲ್ 1ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ನ ಬಳಕೆ ಆರಂಭಿಸಲಿದೆ. ಗ್ರಾಹಕರು ಪ್ರತಿ ಲೀಟರ್ ತೈಲದ ಮೇಲೆ ಸುಮಾರು 50 ಪೈಸೆಯಿಂದ 1 ರೂಪಾಯಿ ವರೆಗೆ ಹೆಚ್ಚು ಹಣ ಪಾವತಿಸಬೇಕಾಗಬಹುದು. ಎಲ್ಲ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು EURO-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲನ್ನು ಬಳಕೆದಾರರಿಗೆ ಪೂರೈಸಲು ಸಜ್ಜಾಗಿವೆ. EURO-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ ಬಳಕೆಯಿಂದ ವಾಯು ಮಾಲಿನ್ಯವನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ.