Job Description: ಹೊಸದಿಲ್ಲಿ: ರಾಮಮಂದಿರ ಟ್ರಸ್ಟ್‌ನ ಮೊದಲ ಸಭೆ ನವದೆಹಲಿಯಲ್ಲಿ ನಡೆದಿದ್ದು, ಮಹಾಂತ ನೃತ್ಯ ಗೋಪಾಲ ದಾಸ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಉಳಿದಂತೆ * ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ, * ನೃಪೇಂದ್ರ ಮಿಶ್ರಾ ಅವರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥರರಾಗಿ ಆಯ್ಕೆ * ಪುಣೆಯ ಸ್ವಾಮಿ ಗೋವಿಂದ ದೇವ ಗಿರಿ ಅವರು ಖಜಾಂಜಿಯಾಗಿ ಆಯ್ಕೆ ಹಿರಿಯ ನ್ಯಾಯವಾದಿ ಕೆ.ಪರಾಶರನ್ ಅವರ ನಿವಾಸದಲ್ಲಿ ನಡೆದ ಈ ಮೊದಲ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. * ಕರ್ನಾಟಕದಿಂದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡ ಈ ಟ್ರಸ್ಟ್ ನ ಸದಸ್ಯರಲ್ಲೊಬ್ಬರಾಗಿದ್ದಾರೆ.