Job Description: ಕ್ರೀಡಾ ಲೋಕದ ಆಸ್ಕರ ಎಂದೇ ಹೇಳಬಹುದಾದ "ಲಾರಿಯಸ್ ಸ್ಪೋಟ್ಸ್ರಿಂಗ್ ಮೊಮೆಂಟ್ ಅವಾರ್ಡ್" ಅನ್ನು 2000-2020 ನೇ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪಾಲಾಗಿದೆ. ಸಚಿನ್ ಅವರು ಅತೀ ಹೆಚ್ಚು ವೀಕ್ಷಕರ ವೋಟ್ ಪಡೆದು ಈ ಪ್ರಶಸ್ತಿಗೆ ಪಾತ್ರರಾದರು. ಬರ್ಲಿನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೆನಿಸ್ ದಿಗ್ಗಜ ಬ್ರಾಸ್ ಬೆಕರ್ ಪ್ರಶಸ್ತಿ ವಿಜೇತರ ಘೋಷಣೆ ಮಾಡಿದರು ಮತ್ತು ಕ್ರಿಕೆಟ್ ದಿಗ್ಗಜ ಸ್ಟೀವ್ ವಾ ಅವರು ಸಚಿನ್ ತೆಂಡೂಲ್ಕರ ಅವರಿಗೆ ಟ್ರೋಫಿಯನ್ನು ನೀಡಿದರು.