Job Description: ಭಾರತದ ಭಾವನಾ ಜಾಟ್ ಅವರು ಟೋಕಿಯೊ ಒಲಿಂಪಿಕ್ಸ್ ಗೇಮ್ ನಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ. ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾವನಾ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು. ಒಲಿಂಪಿಕ್ ಅರ್ಹತೆಗೆ ಒಟ್ಟು 1 ತಾಸು 31 ನಿಮಿಷಗಳ ಗುರಿ ನಿಗದಿಪಡಿಸಲಾಗಿತ್ತಾದರೂ ಭಾವನಾ ಅವರು 1 ತಾಸು 29.54 ನಿಮಿಷಗಳಲ್ಲಿ ನಿಗದಿತ ಗುರಿ ತಲುಪಿದರು. ಇದು ಮೂಲತ ರಾಜಸ್ತಾನದವರಾದ ಭಾವನಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಕೂಡ.