Job Description: ಪಾಕ್ ಪ್ರವಾಸ ಕೈಗೊಂಡಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೀಪ್ ಎರ್ಡೋಗನ್, ಜಮ್ಮು ಕಾಶ್ಮೀರ ಮೂಗುತೂರಿಸಿ ಹೇಳಿಕೆ ನೀಡಿದ್ದು, ಟರ್ಕಿ ಅಧ್ಯಕ್ಷ ಎರ್ಡೋಗನ್ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಚಾರದಲ್ಲಿ ಟರ್ಕಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಭಾರತ ಟರ್ಕಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಸತ್ಯಾಂಶ ಏನು ಎಂಬುದನ್ನು ಸರಿಯಾಗಿ ಮೊದಲು ತಿಳಿದುಕೊಳ್ಳಲಿ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.