Job Description: ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು 2ನೇ BIMSTEC ವಿಪತ್ತು ನಿರ್ವಹಣಾ ತರಬೇತಿ - 2020 (BIMSTEC DMX-2020) ಕಾರ್ಯಕ್ರಮಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ದಿನಾಂಕ ಫೆಬ್ರವರಿ 11, 2020 ರಿಂದ ಫೆಬ್ರವರಿ 13, 2020 ರ ನಡುವೆ ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆಯಲಿದೆ. ಪ್ರವಾಹ, ಭೂಕಂಪ ಮತ್ತು ಬಿರುಗಾಳಿಗಳ ಸಮಯದಲ್ಲಿ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯವಿಧಾನಗಳು, ವಿಪತ್ತಿನ ಸಮಸ್ಯೆಗಳು ಪರಿಶೀಲಿಸುವದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ. ಈ ತರಬೇತಿ ಅಭ್ಯಾಸದಲ್ಲಿ ವಿಪತ್ತುಗಳಿಂದ ಹಾನಿಗೊಳಗಾದ ಐತಿಹಾಸಿಕ ತಾಣಗಳ ಪುನರ್ ಸ್ಥಾಪಿಸಲು ಒತ್ತು ನೀಡುತ್ತದೆ. BIMSTEC ರಾಷ್ಟ್ರಗಳಾದ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ನೇಪಾಳ ಈ ವ್ಯಾಯಾಮದಲ್ಲಿ ಭಾಗವಹಿಸಲಿವೆ. ಇನ್ನು ಎರಡು BIMSTEC ರಾಷ್ಟ್ರಗಳಾದ ಥೈಲ್ಯಾಂಡ್ ಮತ್ತು ಭೂತಾನ್ ಈ ಬಾರಿ ತರಬೇತಿಯಲ್ಲಿ ಭಾಗವಹಿಸುತ್ತಿಲ್ಲ.