Job Description: ಭಾರತದ ವಿದೇಶಾಂಗ ಸಚಿವಾಲಯ ಮತ್ತು Federation of Indian Chambers of Commerce and Industry (FICCI) ಇತ್ತೀಚೆಗೆ ಭಾರತ-ಮಧ್ಯ ಏಷ್ಯಾ ಉದ್ಯಮ ಕೌನ್ಸಿಲ್ ಅನ್ನು(Bharath-Central Asia Business Council) ಪ್ರಾರಂಭಿಸಿದವು. ತಜಕಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್, Kazakhstan ಮತ್ತು ಕಿರ್ಗಿಜ್ ರಿಪಬ್ಲಿಕ್ ಎಂಬ 5 ದೇಶಗಳು ಈ ಉದ್ಯಮ ನಿಗಮವನ್ನು ಸೇರಿಕೊಂಡಿವೆ. ಮಧ್ಯ ಏಷ್ಯಾ ಮತ್ತು ಭಾರತದ ವ್ಯವಹಾರಗಳಿಗೆ ಈ ಕೌನ್ಸಿಲ್ ಸಾಮಾನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. *ವಿದೇಶಾಂಗ ಸಚಿವಾಲಯದ ಪ್ರಕಾರ ದೇಶಗಳ ನಡುವಿನ ವ್ಯಾಪಾರವು 2 ಬಿಲಿಯನ್ USD($) ಆಗಿದೆ. * ಚಬಹಾರ್ ಬಂದರನ್ನು ವಾಣಿಜ್ಯಿಕವಾಗಿ ಆಕರ್ಷಕವಾಗಿಸುವ ಕುರಿತು ಚರ್ಚಿಸಿಲಾಯಿತು. * ಭಾರತ ಮತ್ತು ಉಳಿದ ಮಧ್ಯ ಏಷ್ಯಾದ ನಾಲ್ಕು ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಕೌನ್ಸಿಲ್ ಹೊಂದಿದೆ. *ಅವರು ತೈಲ ಮತ್ತು ಅನಿಲ, ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಶಕ್ತಿ, ಜೀವ ವಿಜ್ಞಾನ, ಔಷಧೀಯ , ಕೃಷಿ-ಆಹಾರ ಸಂಸ್ಕರಣೆ, ಐಟಿ, ನಗರ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ಸಾರಿಗೆ ಬಗ್ಗೆ ಗಮನ ಹರಿಸಲಿದ್ದಾರೆ.