Job Description: ಪ್ರತಿವರ್ಷ ಜನವರಿ 30 ರಂದು ವಿಶ್ವ ಕುಷ್ಠರೋಗ ದಿನವನ್ನು ಆಚರಿಸಲಾಗುತ್ತದೆ. ಏಕೆಂದರೆ ಭಾರತದಲ್ಲಿ 1948 ರಲ್ಲಿ ಈ ದಿನ ಹತ್ಯೆಗೀಡಾದ ಮಹಾತ್ಮ ಗಾಂಧಿಯವರ ಸಾವಿನ ನೆನಪಿಗಾಗಿ ಕುಷ್ಠರೋಗದಿಂದ ಪ್ರಭಾವಿತವಾಗಿದ ಜನರಿಗೆ ಸಹಾಯ ಮಾಡಿದ ಮಹಾತ್ಮ ಗಾಂಧಿಯವರಿಗೆ ಗೌರವವಾಗಿ ಈ ದಿನವನ್ನು ಫ್ರೆಂಚ್ ಮಾನವೀಯ ರೌಲ್ ಫೋಲೆರಿಯೊ ಆಯ್ಕೆ ಮಾಡಿದರು. ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ ಕೊನೆಯ ಭಾನುವಾರದಂದು ವಿಶ್ವ ಕುಷ್ಠರೋಗ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ವಿಶ್ವ ಕುಷ್ಠರೋಗ ದಿನದ ಈ ವರ್ಷದ ವಿಷಯವೆಂದರೆ “ಕುಷ್ಠರೋಗವು ನಿಮ್ಮ ಅನಿಸಿಕೆ ಅಲ್ಲ (Leprosy isn’t what you think”)”.