Job Description: ಟಾಮ್ ಟಾಮ್ ಎನ್ನುವಂತ ಸಂಸ್ಥೆಯೊಂದು ವಿಶ್ವದ 57 ದೇಶಗಳ, 415 ನಗರಗಳನ್ನು ವರದಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು ಮಾಹಿತಿ ಸಂಗ್ರಹಿಸಿದೆ. ಈ ವರದಿಯ ಅನುಸಾರ ವಿಶ್ವದ ನಂ.1 ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ನಗರಗಳ ಪೈಕಿ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು. ರಾಜ್ಯದ ಬೆಂಗಳೂರು ನಂ.1 ಸ್ಥಾನ ಗಳಿಸಿದೆ. ಈ ಮೂಲಕ ಟ್ರಾಫಿಕ್ ಕಿರಿಕಿರಿಯಲ್ಲಿ ಬೆಂಗಳೂರು ಜಗತ್ತಿನಲ್ಲೇ ನಂ.1 ಸ್ಥಾನ ಗಳಿಸಿದ್ದು, ಇದು ಟಾಮ್ ಟಾಮ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಸಾಬೀತಾಗಿದೆ. ಸಮೀಕ್ಷೆಯ ಪ್ರಕಾರ ಟಾಪ್ 10 ಟ್ರಾಫಿಕ್ ಕಿರಿಕಿರಿ ನಗರಗಳಲ್ಲಿ ಭಾರದ 4 ನಗರಗಳು ಸ್ಥಾನ ಗಳಿಸಿವೆ.