Job Description: 'ಹಸುರು ಪರಿಸರ' ಕ್ಷೇತ್ರದಲ್ಲಿ ಮಡಿದ ಸಾಧನೆ ಗಮನಿಸಿ ಪರಿಗಣಿಸಿ ಭಾರತದ ಪರಿಸರ ತಜ್ಞ ಪವನ್ ಸುಖ್‌ದೇವ್ ಅವರಿಗೆ 'ಟೇಲರ್ ಪುರಸ್ಕಾರ' ವನ್ನು ಪ್ರಕಟಿಸಲಾಗಿದೆ. ಈ ಪ್ರಶಸ್ತಿಯನ್ನು ಪರಿಸರ ಸಂರಕ್ಷಣೆಗಾಗಿ ನೀಡಲಾಗುವ "ನೊಬೆಲ್" ಎಂದೇ ಪರಿಗಣಿಸಲಾಗಿದೆ, ಪವನ್ ಸುಖ್‌ದೇವ್ ಅವರು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ ೧ ೨೦೨೦ ರಂದು ಇವರಿಗೆ 2 ಲಕ್ಷ ಅಮೆರಿಕನ್ ಡಾಲರ್ ನಗದು ಮತ್ತು ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.