Job Description: ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆಗೊಂಡಿದೆ.ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಆಕರ್ಷಣೆಯ ಕೇಂದ್ರ ಬಿಂದು ಆಗಲಿದೆ. ಈ ಬಾರಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಈ ಕ್ಷಿಪಣಿ ಮೊದಲ ಬಾರಿ ಪ್ರದರ್ಶನಗೊಂಡಿದೆ. 3 ಚಿನೂಕ್ ಹೆಲಿಕಾಪ್ಟರ್ ಗಳು ರಾಜಪಥದ ಮೇಲೆ ಹಾರಾಟ ಕೈಗೊಂಡಿವೆ. ಇದೇ ವೇಳೆ ಸ್ವದೇಶಿ ನಿರ್ಮಿತ ಕೆ-9 ವಜ್ರ ಟ್ರಾಂಕರ್ ಕೂಡ ಪ್ರದರ್ಶನಗೊಂಡಿವೆ. ಪರೇಡ್ ನಲ್ಲಿ ಕ್ಯಾ ತಾನಿಯಾ ಶೇರ್ಗೀಲ್ ಪುರುಷರ ಪಥ ಸಂಚಲನವನ್ನು ಮುನ್ನಡೆಸಿದ್ದಾರೆ. ಮಹಿಳೆಯರ ಸಿಆರ್'ಪಿಎಫ್ ಬೈಕ್ ಸವಾರರ ತಂಡ ಗಣರಾಜ್ಯೋತ್ಸವ ವೇಳೆ ಮೊದಲ ಬಾರಿ ಸಾಹಸ ಪ್ರದರ್ಶನನೀಡಿದೆ. 65 ಸದಸ್ಯರ ಈ ತಂಡ ರಾಯಲ್ ಎನ್'ಫೀಲ್ಡ್ ಬುಲೆಟ್ ಬೈಕಿನಲ್ಲಿ ಚಮತ್ಕಾರಿಕ ಕೌಶಲ್ಯಗಳನ್ನು ಪ್ರದರ್ಶಿಸಿದೆ.