Job Description: ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಪೆಡಂಭೂತದಂತೆ ಕಾಡುತ್ತಿದೆ. ಇದುವರೆಗೆ ಈ ಮಾರಣಾಂತಿಕ ವೈರಸ್ಗೆ 26 ಮಂದಿ ಬಲಿಯಾಗಿದ್ದಾರೆ. ಸುಮಾರು 830 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಕೊರನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಒಟ್ಟು 13 ನಗರಗಳನ್ನು ಬಂದ್ ಮಾಡಿದೆ. ಚೀನಾದ ಮಹಾಗೋಡೆಯ ಸುತ್ತಮುತ್ತ ಕೆಲವು ನಗರಗಳು ಸೇರಿ ಬೀಜಿಂಗ್ನ ಪ್ರಮುಖ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.ಈ ಪ್ರದೇಶಗಳಿಂದ ಜನರು, ವಾಹನಗಳು ಹೊರಗೆ ಹೋಗುವುದನ್ನು ಮತ್ತು ಇಲ್ಲಿಗೆ ಪ್ರವೇಶ ಮಾಡುವುದನ್ನು ನಿರ್ಭಂದಿಸಿರುವುದಾಗಿ ಸರ್ಕಾರ ಘೋಷಿಸಿದೆ.