Job Description: ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರು. ತಾಯಿ ವಿಜಯಮ್ಮ, ಪತಿ ಬಿಕ್ಕಲ ಚಿಕ್ಕಯ್ಯ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರು. 4 ಕಿ.ಮೀ. ಉದ್ದಗಲಕ್ಕೂ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 8,000 ಗಿಡಗಳನ್ನು ನೆಟ್ಟರು. “ಸಾಲುಮರದ ತಿಮ್ಮಕ್ಕ” ಎಂಬ ಬಿರುದಾಂಕಿತದ ಗರಿ ಮುಡಿಗೇರಿಸಿತು. ಭಾರತ ಸರ್ಕಾರ 2019 ರಲ್ಲಿ “ಪದ್ಮಶ್ರೀ” ಪ್ರಶಸ್ತಿಯನ್ನು ಕೊಟ್ಟ ಗೌರವಿಸಿತು. ಮಕ್ಕಳಿಲ್ಲ ಎಂಬ ಕಾರಣಕ್ಕೆ ಉಮೇಶ್ ಬಿ ಎನ್ ಅವರನ್ನು ದತ್ತು ಪುತ್ರನಾಗಿ ಸ್ವೀಕರಿಸಿದ್ದರು. ತಿಮ್ಮಕ್ಕ ಇಂದು ಸಾಲುಮರದ ಸಾಧಕಿ.ಶತಾಯುಷ್ಯವನ್ನು ಪಡೆದ ಮಹಾ ತಾಯಿ. 109 ನೇ ವರ್ಷದ ವಸಂತದಲ್ಲಿಯೂ ಲವಲವಿಕೆಯಿಂದ ಓಡಾಡುತ್ತಿದ್ದಾರೆ.. “ಸಾಲುಮರದ ತಿಮ್ಮಕ್ಕ ನಿನಾಗಬಾರದೆ ನನ್ನಕ್ಕ” ಎಂಬ ಗಾದೆ ಜನಪ್ರಿಯವಾಗಿದೆ.