Job Description: ಬೆಂಗಳೂರು: "ಹಲೋ... ನಾನು ವ್ಯೋಮಮಿತ್ರ. ಮೊದಲ ಮಾನವರಹಿತ ಗಗನಯಾತ್ರೆ ಯೋಜನೆಗಾಗಿ ನನ್ನನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ನೀಡುವುದು ಹಾಗೂ ಜೀವ ರಕ್ಷಣ ಕಾರ್ಯಗಳಲ್ಲಿ ನಾನು ಸಹಕರಿಸುತ್ತೇನೆ. ಸ್ವಿಚ್ ಪ್ಯಾನಲ್ ಕಾರ್ಯ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಬಲ್ಲೆ..." ಎಂದು ನೆರೆದಿದ್ದವರಿಗೆ ತನ್ನ ಪರಿಚಯ ಹೇಳಿಕೊಂಡಿದ್ದು ಮಹಿಳಾ ರೊಬೊಟ್. 2021ರ ಡಿಸೆಂಬರ್ಗೆ ಗಗನಯಾತ್ರಿಗಳ ಗಗನಯಾನ ನಡೆಯಲಿದ್ದು, ಅದಕ್ಕೂ ಮುನ್ನ ವ್ಯೋಮಮಿತ್ರ ಬಾಹ್ಯಾಕಾಶ ಯಾನ ನಡೆಯಲಿದೆ. ಮಹಿಳಾ ರೊಬೊಟ್ ತನ್ನನ್ನು ಪರಿಚಯಿಸಿಕೊಳ್ಳುವ ಮೂಲಕ ನೆರೆದವರಲ್ಲಿ ಅಚ್ಚರಿ ಉಂಟು ಮಾಡಿತು. 2020ರ ಡಿಸೆಂಬರ್ ಹಾಗೂ 2021ರ ಜೂನ್ನಲ್ಲಿ ಎರಡು ಬಾರಿ ಇಸ್ರೋ ಮಾನವ ರಹಿತ ಬಾಹ್ಯಾಕಾಶ ಯಾನ ನಡೆಸಲಿದೆ. ಆ ಬಳಿಕ ದೇಶದ ಮೊದಲ ಮಾನವ ಸಹಿತ ಗಗನಯಾತ್ರೆ ನಡೆಯಲಿದೆ.