Job Description: ನವದೆಹಲಿ: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 34 ವರ್ಷದ ದೀಪಿಕಾ ಅವರಿಗೆ ವಿಶ್ವ ಆರ್ಥಿಕ ವೇದಿಕೆಯ ವಿಶ್ವ ಕಲಾ ವೇದಿಕೆ ಅಧ್ಯಕ್ಷೆ ಮತ್ತು ಸಹ-ಸಂಸ್ಥಾಪಕಿ ಹಿಲ್ಡೆ ಶ್ವಾಬ್ ಅವರು ಪ್ರದಾನ ಮಾಡಿದರು. ಖಿನ್ನತೆಯಿಂದ ಬಳಲುತ್ತಿದ್ದ ದೀಪಿಕಾ ಅವರು 2015ರಲ್ಲಿ ಅದರಿಂದ ಹೊರಬಂದಿದ್ದರು. ಅದೇ ಪ್ರೇರಣೆಯಿಂದ 'ದಿ ಲೈವ್, ಲವ್, ಲಾಫ್ ಫೌಂಡೇಶನ್' ಅನ್ನು ಸ್ಥಾಪಿಸಿರುವ ಅವರು, ಈ ಮೂಲಕ ಮಾನಸಿಕ ಅಸ್ವಸ್ಥತೆಯನ್ನು ಎದುರಿಸುತ್ತಿರುವವರಿಗೆ ನೆರವಾಗುತ್ತಿದ್ದಾರೆ.