Job Description: ರೋಮ್: 'ರೋಮ್ ರ್‍ಯಾಂಕಿಂಗ್ ಸೀರಿಸ್' ಕುಸ್ತಿ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಮುಂದುವರಿಸಿದ ಭಾರತದ ವಿನೇಶ್ ಪೋಗಟ್ ಚಿನ್ನದ ಪದಕದ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು 53 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದೇ ವೇಳೆ 57 ಕೆಜಿ ವಿಭಾಗದಲ್ಲಿ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದಿದ್ದಾರೆ. ಶನಿವಾರದ ಮುಖಾಮುಖೀಯಲ್ಲಿ ವಿನೇಶ್ ಪೋಗಟ್ 4-2 ಅಂಕಗಳಿಂದ ಚೀನದ ಕ್ವಿನ್ಯು ಪಾಂಗ್ ಅವರನ್ನು ಉರುಳಿಸಿದರು. ಇದಕ್ಕೂ ಮುನ್ನ ಕ್ರಿಸ್ಟಿನಾ ಬಿರೆಝ (10-0) ಮತ್ತು ಲಾನೌನ್ ಲೊ (15-5) ಅವರನ್ನು ಮಣಿಸಿದ್ದರು. ಫೈನಲ್‌ನಲ್ಲಿ ವಿನೇಶ್ ಎದುರಾಳಿ ಈಕ್ವಡಾರ್‌ನ ಲುಯಿಸಾ ಎಲಿಜಬೆತ್ ವಾಲ್ವೆರ್ಡ್ ಮಿಲೆಂಡ್ರೆಸ್.