Job Description: ಆತಿಥೇಯ ಭಾರತ ವಿರುದ್ಧ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ವಾರ್ನರ್ ಮತ್ತು ಫಿಂಚ್ ಶತಕಗಳ ನೆರವಿನಲ್ಲಿ ಭರ್ಜರಿ ಜಯ ಗಳಿಸಿದೆ. ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 256 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 37.4 ಓವರ್‌ಗಳಲ್ಲಿ 258 ರನ್ ಗಳಿಸುವ ಭರ್ಜರಿ ಜಯ ದಾಖಲಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಔಟಾಗದೆ 128 ರನ್( 112ಎ, 17ಬೌ,3ಸಿ) ಮತ್ತು ನಾಯಕ ಆಯರನ್ ಫಿಂಚ್ ಔಟಾಗದೆ 110 ರನ್(114ಎ, 13ಬೌ,2ಸಿ) ಗಳಿಸಿದರು. ಭಾರತ 255: ಆಸ್ಟ್ರೇಲಿಯ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಭಾರತ 49.1 ಓವರ್‌ಗಳಲ್ಲಿ 255ಕ್ಕೆ ಆಲೌಟಾಗಿತ್ತು.